Your shopping cart is empty!
ಈ ಕೈಪಿಡಿಯಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಚಟುವಟಿಕೆಗಳನ್ನು ಹೇಳಿಕೊಡಬಹುದಾದ ವಿಧಾನಗಳನ್ನು ಕೊಡಲಾಗಿದೆ. ಕೇಳಿಸಿಕೊಳ್ಳುವುದರ ಮೂಲಕ ಶಬ್ದಗಳ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಕೇಳಿಸಿಕೊಳ್ಳುವುದರ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸುವುದು, ವಿವಿಧ ಗುಂಪಿಗೆ ಸೇರಿದ ಪದಗಳನ್ನು ಕಲಿಸುವುದು, ಬಣ್ಣ ಮತ್ತು ಆಕಾರಗಳನ್ನು ಕಲಿಸುವುದು, ಪ್ರಶ್ನೆಗಳಿಗೆ ಹೌದು/ಇಲ್ಲ ಎಂದು ಉತ್ತರಿಸುವುದನ್ನು ಕಲಿಸುವುದು, ಸಾಮಾನ್ಯ ಕ್ರಿಯಾಪದಗಳು, ಬಹುವಚನಗಳು, ಉಪಸರ್ಗಗಳು ಮತ್ತು ಸರ್ವನಾಮಗಳನ್ನು ಹೇಳಿಕೊಡುವುದು ಹಾಗೂ ೪-೫ ಪದಗಳನ್ನು ಸೇರಿಸಿ ಅರ್ಥಪೂರ್ಣವಾದ ವಾಕ್ಯಗಳನ್ನು ರಚಿಸುವುದರ ಬಗ್ಗೆಯೂ ತಿಳಿಸಲಾಗಿದೆ.